Rotti Mane - Food Delivery App
Company

Rotti Mane - Food Delivery App

Restaurants Bengaluru, Karnataka, In 6 employees
Employees
6

Rotti Mane - Food Delivery App Overview

Headquarters
Bengaluru, Karnataka, In
Website
rottimane.com
Industry
Restaurants
Employees
6
Founded
2019
NAICS
Restaurants and Other Eating Places
Full-Service Restaurants
Limited-Service Restaurants
Keywords

About Rotti Mane - Food Delivery App

Order Uttara Karnataka food online from Uttara Karnataka restaurants and get it delivered. Serving in Bangalore We covered All Major Areas in Bangalore #ಉತ್ತರ #ಕರ್ನಾಟಕ #ಖಾನಾವಳಿ, #ಅಥವಾ #ಬಸವೇಶ್ವರ #ರೊಟ್ಟಿ #ಖಾನಾವಳಿ. ಇಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಹೋಳಿಗೆ ಊಟ ಸಿಗುತ್ತದೆ ಎಂದು ಸಾಮಾನ್ಯವಾಗಿ ಈ ಮೇಲಿನ ಫಲಕಗಳನ್ನಾ ಬೆಂಗಳೂರಿನ ಎಲ್ಲ ಕಡೆ ನೋಡಿರುತ್ತೀರಿ. ವಿಶೇಷವಾಗಿ ಉತ್ತರ ಕರ್ನಾಟಕ ದ ಜನರೇ ಇರುವ ರಾಜಾಜಿ ನಗರ, ವಿಜಯ ನಗರ, ಚಂದ್ರಾ ಲೇಔಟ್, ಬಸವೇಶ್ವರ ನಗರ, ಮಲ್ಲೇಶ್ವರ ಇನ್ನು ಮುಂತಾದ ಕಡೆ ಈ ತರಹದ ಖಾನವಳಿಗಳು ಹೆಚ್ಚು. ಆದರೆ ತುಂಬಾ ಬೇಸರದ ಸಂಗತಿಯೆಂದರೆ ನೀವು ಊಟಕ್ಕೆಂದು ಅಲ್ಲಿ ಹೋದರೆ ನಿಮ್ಮ ಮನಸ್ಸಿಗೆ ಅತೃಪ್ತಿಯಾಗುವುದು ಖಚಿತ. ಏಕೆಂದರೆ ಉತ್ತರ ಕರ್ನಾಟಕದ ಊಟಕ್ಕೆ ತನ್ನದೇ ಅದ ಒಂದು ಹಿನ್ನಲೆ, ವಿಶೇಷತೆ ಇದೆ. ಇದು ಕೇವಲ ಊಟವಲ್ಲ, ಇದು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಪ್ರತಿರೂಪ. ಬೆಂಗಳೂರಿನಲ್ಲಿ ಸುಮಾರು 10 ರಿಂದ 12 ಲಕ್ಷ ಜನ ಉತ್ತರ ಕರ್ನಾಟಕದ ಜನರಿದ್ದಾರೆ. ಅದರಲ್ಲಿ ಕಡಿಮೆ ಅಂದ್ರೂ 3-4 ಲಕ್ಷ ಜನ ಅವಲಿಂಬಿಸಿರುವುದು ಈ ಉತ್ತರ ಕರ್ನಾಟಕದ ಹೆಸರಿನ ಖಾನವಳಿಗಳನ್ನೆ. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಈ ಖಾನವಳಿಗಳೆ ಅವರಿಗೆ ಗತಿ. ಆದರಲ್ಲಿ ವೈಟ್ ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಸರ್ಜಪೂರ, ದೊಮ್ಮಲೂರು ಮುಂತಾದ ಕಡೆಗಳಲ್ಲಿ ಈ ಶುಚಿ ರುಚಿಯಾದ ಊಟ ಸಿಗುವುದು ತುಂಬಾ ಅಪರೂಪ. ಸಿಕ್ಕರೂ ಅದರ ರುಚಿ ಅಷ್ಟಕಷ್ಟೇ. ಕೇವಲ ಹೊಟ್ಟೆ ತುಂಬಿದರೆ ಸಾಕಪ್ಪ ಅನ್ನೋ ಕಾಟಕ್ಕೆ ಈ ಊಟ ಮಾಡಬೇಕು. ಇನ್ನು ಆ ಖಾನಾವಳಿ ಮಾಲಿಕರನ್ನ ಕೇಳಿದರೆ, "ಅಣ್ಣಾರ ಈವತ್ತು ಒಂದು ದಿವಸ ಅಡ್ಜಸ್ಟ್ ಮಾಡಕೊಳ್ಳರಿ, ರೊಟ್ಟಿ ಮಾಡವರ ಈವತ್ತು ಬಂದಿಲ್ಲ, ಅಡುಗೆ ಭಟ್ಟ ಬಂದಿಲ್ಲ" ಎಂದು ಕಾರಣ ಹೇಳಿ ಸಮಾಧಾನ ಪಡಿಸುತ್ತಾರೆ. ಅದಕ್ಕಿಂತ ಮೊದಲು ಈ ನಮ್ಮ ಉತ್ತರ ಕರ್ನಾಟಕದ ಊಟದ ವಿಶೇಷತೆ ನೋಡೋಣ. ಜೋಳದ ರೊಟ್ಟಿ ಊಟದ ಹೆಸರು ಕೇಳಿದ ಕೂಡಲೆನೆ ನಮ್ಮ ಉತ್ತರ ಕರ್ನಾಟಕದ ಜನರ ಮನಸ್ಸಿನಲ್ಲಿ ಬರುವುದು ಬಿಸಿ ಬಿಸಿ ಜೋಳದ ರೊಟ್ಟಿ, ಎಣ್ಣಗಾಯಿ ಪಲ್ಯ ಜೊತೆಗೆ ಬೇರೆ ವಿಧದ ತರಕಾರಿ, ಕಾಳು ಪಲ್ಯ, ಗಟ್ಟಿ ಮೊಸರು, ಶೇಂಗಾ ಚಟ್ನಿ, ಕೊಬ್ಬರಿ ಚಟ್ನಿ, ಈರುಳ್ಳಿ, ಹಸಿ ಮೆತ್ತೇ ಸೊಪ್ಪು, ಮೂಲಂಗಿ, ಗಜ್ಜರಿ, ಸವತೆಕಾಯಿ, ಅನ್ನ, ಸಾರು, ಹಪ್ಪಳ ಮತ್ತು ಒಂದು ಲೋಟ ಮಜ್ಜಿಗೆ. ವಿಶೇಷ ಹಬ್ಬ ಹರಿ ದಿನಗಳಲ್ಲಿ ಹೋಳಿಗೆ ತುಪ್ಪ, ಕಟ್ಟಿನ ಸಾರು, ಸಂಡಿಗೆ ಊಟದ ಗತ್ತೆ ಬೇರೆ. ಜಸ್ಟ್ ಹೊಡಿ 9... ಹೊಡಿ 9.. ಹೊಡಿ 9....😃 ಇನ್ನು ಹಳ್ಳಿಮನೆ, ನಳಪಾಕ, ಕಾಮತ ಮುಂತಾದ ಹೊಟೇಲುಗಳಲ್ಲಿ ಜನರೇ ಎಷ್ಟೊಂದು ಸಾರಿ ಸರದಿ ಸಾಲಿನಲ್ಲಿ ನಿಂತು ಈ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟವನ್ನು ಮಾಡಿ ಸಂತೃಪ್ತಿಯಾಗಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚಿನ ಮದುವೆ- ಮುಂಜಿ, ಮುಂತಾದ ಶುಭ ಕಾರ್ಯಗಳಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟಕ್ಕೆ ವಿಶೇಷ ಪ್ರಾತಿನಿಧ್ಯ ನೀಡಲಾಗುತ್ತಿದೆ.

Compare Similar Companies to Rotti Mane - Food Delivery App